Naaniruvude nimagaagi lyrics - Mayura
Naaniruvude nimagaagi song details
- Song: NAANIRUVUDE NIMAGAAGI
- Singer: DR.RAJKUMAR
- Lyrics: CHI UDAYASHANKAR
- Film: MAYURA
- Starcast: DR RAJKUMAR
- Music: G K VENKATESH
Naaniruvude nimagaagi lyrics in Kannada
ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ
ಕಣ್ಣೀರೇಕೆ ಬಿಸಿ ಉಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ
ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ।೨।
ನಿಮ್ಮೊಡನಿಂದು, ನಾನು ನೊಂದು
ನಿಮ್ಮೊಡನಿಂದು ನಾನು ನೊಂದು ಮಿಡಿದಾ ಕಂಬನಿ ಆರಿಲ್ಲ
ಭರವಸೆ ನೀಡುವೆನಿಂದು ನಾ ನಿಮ್ಮೊಡನಿರುವೆನು ಎಂದೂ ।೨।
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೋಲ್ಲ
ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ ।೨।
ಬಾಳುವಿರೆಲ್ಲ ಹಾಯಾಗಿ ।೨।
ನಾನಿರುವುದೆ ನಿಮಗಾಗಿ
ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೆ ।೨।
ತಪಸ್ಸಿನ ಫಲವೋ ಹಿರಿಯರ ಒಲವೋ
ತಪಸ್ಸಿನ ಫಲವೋ ಹಿರಿಯರ ಒಲವೋ ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ ಈ ನಾಡಿಗೆ ಬಿಡುಗಡೆ ತರುವ ।೨।
ಜನತೆಗೆ ನೆಮ್ಮೆದಿ ಸೌಖ್ಯವ ತರಲು ಪ್ರಾಣವನೆ ಕೊಡುವೆ
ನಾನಿರುವುದೆ ನಿಮಗಾಗಿ
ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿ ಉಸಿರೇಕೆ ।೨।
ಬಾಳುವಿರೆಲ್ಲ ಹಾಯಾಗಿ ।೨।
ನಾನಿರುವುದೆ ನಿಮಗಾಗಿ
Naaniruvude nimagaagi song video :
0 Comments