Ninthe ninthe lyrics ( ಕನ್ನಡ ) - Ninnindale - super cine lyrics

Ninthe ninthe - Vijay Prakash , Chinmayi , Sudhamayi Lyrics

Singer Vijay Prakash , Chinmayi , Sudhamayi

Ninthe ninthe song details - Ninnindale

▪ Song: NINTHE NINTHE
▪ Singer: VIJAY PRAKASH, CHINMAYI, SUDHAMAYI
▪ Lyrics: KAVIRAJ
▪ Film : NINNINDALE
▪ Star Cast : PUNEETH RAJKUMAR, ERICA FARNANDES & Others
▪ Music: MANI SHARMA
▪ Director: JAYANTH PARANJI


Ninthe ninthe song lyrics in Kannada - Ninnindale

ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
ಕೂಗಿ ಹೇಳೋದಾ
ಕೂಗಿ ಹೇಳೋದಾ ನಾವೇ ಲೋಕಕೆ
ನೀನೆ ಸಂಗಾತಿ ನನ್ನ ಜೀವಕೆ

ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ

ನೀನೆ ತಂಗಾಳಿ ನನ್ನ ಹಾದಿಲಿ

ನನ್ನ ಸಂಭ್ರಮ ನಿನಗೆ ಹೇಗೆ ಹೇಳಲಿ

ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ

ನಿನ್ನ ತೊಳಲೇ ನನ್ನ ಉಸಿರು ನಿಲ್ಲಲಿ

ನಾನು ತಾಳುವೇನು ನನಗಾಗೋ ನೋವನು
ನಿಂಗೆ ನೋವಾದರೆ ಅದ ನಾನು ತಾಳೆನು

ಸಾಗಲು ಮುಂದಕೆ ತುಂಬಿದೆ ನಂಬಿಕೆ

ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ

ನೋಡು ನಾ ಬಂದೆ ನಿನ್ನ ಹಿಂದ್ ಹಿಂದೆ

ನಿನ್ನ ಮೋಡಿಗೆ ನನ್ನ ಹೃದಯ ಹಿಗ್ಗಿದೆ

ನಿನ್ನ ಒಂದ್ ಒಂದು ಹೆಜ್ಜೇನು ನಂದೇ ಇನ್ಮುಂದೆ

ಅಷ್ಟೇ ಸಾಲದು ನನ್ನ ಬದುಕು ನಿನ್ನದೆ

ನನ್ನ ಉಸಿರಾಡೋ ಪಿಸು ಮಾತ ಆಲಿಸು
ನಿನ್ನ ನೇರಳಾಗುವ ಅವಕಾಶ ಕಲ್ಪಿಸು

ಎಲ್ಲವ ಗೆಲ್ಲುವೆ ನಿ ಜೊತೆ ನಿಂತರೆ

ತಲ್ಲಣವೇಕೋ ಸ್ವಲ್ಪವೆ ನೀನು ದೂರ ಹೋದರೆ

ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
ಕೂಗಿ ಹೇಳೋದಾ
ಕೂಗಿ ಹೇಳೋದಾ ನಾವೇ ಲೋಕಕೆ
ನೀನೆ ಸಂಗಾತಿ ನನ್ನ ಜೀವಕೆ

ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ



Post a Comment

0 Comments