Devru olledh maadli lyrics ( ಕನ್ನಡ ) - Viraj kannadiga - Super cine lyrics

 Devru olledh maadli lyrics - Viraj kannadiga



Devru olledh maadli song details 

  • Song : Devru olledh maadli
  • Singer : Viraj kannadiga
  • Lyrics : Viraj kannadiga
  • Composition : Viraj kannadiga

Devru olledh maadli lyrics 

ದೇವ್ರ್ ಒಳ್ಳೇದ್ ಮಾಡ್ಲಿ

ಗೋವಾಗೆ ಟ್ರಿಪ್ಪು ಹೋಗೋಣ ಅಂದಾಗಿತ್ತು
Whatsapp group ಅಲ್ಲಿ 
15-16chating ನಡೀತಿತ್ತು
Day and night ಜೋರು ಜೋರು 
ಟ್ರಿಪ್ಪು ಹೋಗೋದಿಕ್ಕೆ ಎಲ್ಲರೂ ರೆಡಿ
ಒಬ್ಬ ತರ್ತೀನಿ ಅಂದ ಅವನಪ್ಪಂದ್ ಕಾರು
ಇನ್ನೂ ಒಬ್ಬ ತರ್ತೀನಿ ಅಂದ ಅವನ್ pulser 
ಮತ್ತೊಬ್ಬ ಹೇಳ್ದ ಟ್ರೈನ್ ಅಲ್ಲೆ ಎಲ್ಲಾರು ಹೋಗೋದಿಕ್ಕೆ
ಟ್ರಿಪ್ ಹೋಗೋದಿಕ್ಕೆ ಎಲ್ಲರೂ ರೆಡಿ
ನಡೀ ಗುರು ನಡೀ ಗುರು 
ಶಾಪಿಂಗ್ ಶುರು ಶುರು 
ಟೂತ್ ಬ್ರೆಶ್, ಬ್ರೆಶ್ ಬಟ್ಟೆ ಪ್ಯಾಕ್ ಆಗೋಯ್ತು 

ಟ್ರಿಪ್ಪಿಗೆ ಮೂರು ದಿನ ಬಾಕಿ ಇದ್ದಂಗೆ ಈಗ ಒಂದೊಂದೇ message ಬರೋಕೆ ಸ್ಟಾರ್ಟ್ ಆಯಿತು
ಸುರೇಶ್ ಗೆ loose motion 
ರಮೇಶ್ ಗೆ Maths tuition 
ಮಗ ದುಡ್ಡಿಲ್ಲ ಅನ್ನೋ tenction ಅಜ್ಜಿಗೆ ಹುಷಾರಿಲ್ಲ ಅನ್ನೋ emotion 
ಒಬ್ಬೊಬ್ರು ಒಂದೊಂದೆ ಬಿಟ್ರು ಹೀಗೆ 
ಗೋವಾ ಟ್ರಿಪ್ಪು ಕ್ವಂತು ಆಗೋಯ್ತು ಹೊಗೆ ಹೊಗೆ ಹೊಗೆ

ಏ ನಿಮ್ಗೆಲ್ಲಾ ಲೇ
ದೇವ್ರ್ ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 

ಮಗ ನಾನೇನೂ ಓದೆ ಇಲ್ಲ ಅಂದೋನು
ಈವರ್ಷ ಫೇಲಾಗಿದ್ದು subject ನಂದು 2,3 
exam ಅಲ್ಲಿ ಏನು ಬರಿಯೋದಿಲ್ಲ ಅಂತ ಕದ್ದು ಮುಚ್ಚಿ ಬರೀತಿದ್ರು ದೊಡ್ಡ್ ದೊಡ್ಡಗೆ 
ಜೊತೆ ಜೊತೆಗೆ ಕ್ಲಾಸಲ್ಲಿ ನಿದ್ದೆ ಹೊಡ್ಕೊಂಡು ಇದ್ದವ್ರು 
ಬಂಕು ಹೊಡೆದು ಪಾರ್ಕ್ ಸಿನಿಮಾ ಮಾಲ್ ಅಂತ ಸುತ್ತೋರು 
ರಾತ್ರಿ ಎಲ್ಲರೂ ಸೇರಿ pub-g ಆಡ್ಕೊಂಡು ಇದ್ದೋರು adittional sheet ತಗೊಂಡು ಬರೀತಿದ್ರು ಕಥೆ

ಸರಿ ಗುರು ಸರಿ ಗುರು 
ತೋರ್ಸಿ ಒಂಚೂರು 
30ಕ್ಕೆ ಬರೋ ಅಷ್ಟು ಬರೀತಿನಿ
ನಾವೆ ಬರ್ದಿಲ್ಲ ಏನೊ ಅಂದಾಗ ನಂಬ್ತೀನಿ ನಾನು 
Result ಬಂದಾದ್ ಮೇಲೆ ನೋಡ್ತೀನಿ 
ಸುರೇಶ್ ದೂ first class
ರಮೇಶ್ ದೂ Pass 
ಸರಿತ ಸುನೀತ ಇಬ್ರೂದು ಒಳ್ಳೆ marks

ಎಲ್ಲರೂ ಕಾಗೆ ಹಾರಿಸಿದ್ರೂ ನಂಗೆ
ನಂದೂ 3 subject ಹೋಯ್ತು ಹೊಗೆ
ಹೊಗೆ ಹೊಗೆ ಹೊಗೆ
ಅಮ್ಮ ನಿಮ್ಗೆಲ್ಲಾ ದೇವ್ರ್ ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 

500,1000 ಅಂತ ಕೇಳಿದ್ದೆ ಕೇಳಿದ್ದೆ ಕೇಳಿದ್ದು 
ವಾಪಾಸ್ ಕೊಟ್ಟು ಬಿಡ್ತೀನಿ ಮಗ
ನಾಳೆ ಕಳೆದು ನಾಡಿದ್ದು ಅಂತ ಅಂದೋರು ತಿಂಗಳಾನುಗಟ್ಟಲೆ ಕೊಡ್ದೇನೆ ಹೋಗಿದ್ದು 

ಸಾಲ ಕೊಟ್ಟಿದ್ದೂ ನಾನೆ ಹಿಂದಿಂದೆ ಹಿಂದಿಂದೆ ಹೋಗಿದ್ದು
ಸಾಲ ಕೊಟ್ಟಿದ್ದು ನಾನಾ
ಸಾಲ ಕೊಟ್ಟವ್ನು ಅವನಾ
ವಾಪಾಸು ಕೇಳಿ ಕೇಳಿ ಕಳ್ಕೊಂಡಾಯ್ತು ಮಾನ
ಬಿಟ್ಹಾಕು ಹೋದ್ರೆ ಹೋಯ್ತು 
ಸುಮ್ಮನೆ ಇದ್ದು ಬಿಡೋಣ 
ಅಂತ ಅನ್ಕೊಂಡು ಇದ್ರೆ
ಸಿಕ್ತಾರೆ ಇನ್ನಷ್ಟು ಜನ 
ತಡಿ ಗುರು ತಡಿ ಗುರು 
ಸ್ವಲ್ಪ ಸೈಡಲ್ಲಿ ಇರು
ಕೊಟ್ಟಿರೊ ಸಾಲ ವಾಪಾಸ್ ಬರ್ಲಿ ಇರು

ಉಳಿದಿರೊ ಚೂರು ಪಾರು 
ಜೇಬಲ್ಲಿ ತೂತು ನೂರು 
ಸಾಲ ತಗೊಂಡೋರೆಲ್ಲ ಬಿಟ್ರು ಊರು
ಕೇಳು ಕೇಳು ಬಾಸು
ಆಗೋಯ್ತು ಫುಲ್ ಲಾಸು
ಕೊಟ್ರೆ ಕೈಗೆ ಕಾಸು
ಎಲ್ಲಾರು ದೋಸ್ತ 
ಡೌ ಮಾಡಿ ಕೈ ಎತ್ತಾರೆ ಎಲ್ಲಾ ಹಿಂಗೆ
ಕಾಸೆಲ್ಲಾ ಆಗೋಯ್ತು ಫುಲ್ ಹೊಗೆ

ಏ ನಿಮ್ಗೆಲ್ಲಾ ಲೇ
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ 

ವಿರಾಜ್ ಕನ್ನಡಿಗ
ಬೈಸಿಕೊಂಡ ಬೀಟ್
ದೇವ್ರು ಒಳ್ಳೇದ್ ಮಾಡ್ಲಿ 
ದೇವ್ರು ಒಳ್ಳೇದ್ ಮಾಡ್ಲಿ


Devru olledh maadli music video : 

Post a Comment

0 Comments