Preethiya nota kannalli - Aniruddha sastry Lyrics
Singer | Aniruddha sastry |
Preethiya nota kannalli Radha Krishna title track - Aniruddha sastry
Credits
▪ Singer - AniruddhaSastry
▪ Lyrics - Aniruddha Sastry
▪ Music - Surya Kamal
Preethiya nota kannalli Radha Krishna title track - Aniruddha sastry
ಪ್ರೀತಿಯ ನೋಟ ಕಣ್ಣಲ್ಲಿ
ಮನದಿ ಹುಡುಕಿದೆ ನಿನ್ನ
ಪ್ರೀತಿ ಬರಿ ಪ್ರಿಯತಮನೊಂದಿಗೆ
ಜಗವೇ ಒಂದು ಮಾಯೆಯೋ
ಜಗವೇ ಒಂದು ಮಾಯೆಯೋ
ಪ್ರೀತಿ ಅನನ್ಯ ಪ್ರೀತಿಯು ಮಾನ್ಯ
ಪ್ರೀತಿ ಇಲ್ಲದೆ ಜಗ ಶೂನ್ಯ
ನಿನ್ನಯ ಪ್ರೀತಿ ಪಡೆಯಲು ನಾನು
ನಿಜಕೂ ಇಂದು ಧನ್ಯ
ಧರೆಯ ಪ್ರೀತಿ ಅಂಬರಕೇರಿ
ಪ್ರೀತಿಗೆ ಮೆಚ್ಚಿ ಅಂಬರ ಬಾಗಿ
ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
ಜೀವನವೇ ಪ್ರೀತಿಸುವ
ತನುಮನವ ಗೆಲ್ಲುವುದು
ಮಿಲನದಿ ಆ ಪ್ರೀತಿಯನು
ಗೆಲ್ಲುವನೆ ಈ ಗೊಲ್ಲನು
-------
ಪ್ರೀತಿಯ ಕಣದಿ ಅಡಗಿದೆ ಶಕ್ತಿ
ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
ಪ್ರೀತಿಯ ಕಣದಿ ಅಡಗಿದೆ ಶಕ್ತಿ
ಎಲ್ಲ ನೋವಿಗೂ ಪ್ರೀತಿಯೇ ಮುಕ್ತಿ
ಪ್ರೇಮವೇ ಜೀವ ಪ್ರೇಮವೇ ದೈವ
ಪ್ರೇಮವೇ ಸೃಷ್ಟಿ ಪ್ರೇಮ ಸಮಷ್ಟಿ
ಬೇರೇ ಬೇರೇ ಇದ್ದರು ಅಂದು
ಒಂದಾಗೋಣ ಪ್ರೀತೀಲಿ ಮಿಂದು
ನಿನ್ನ ನನ್ನ ಸಮ್ಮಿಲನದಲಿ ಪ್ರೀತಿ ಹುಟ್ಟಿದೆ
ತಾನು ತನ್ನದೆಂಬ ಭಾವ ಪ್ರೀತಿ ತೋರಿದೆ
ಜೀವನವೇ ಪ್ರೀತಿಸುವ
ತನುಮನವ ಗೆಲ್ಲುವುದು
ಮಿಲನದಿ ಆ ಪ್ರೀತಿಯನು
ಗೆಲ್ಲುವನೆ ಈ ಗೊಲ್ಲನು
0 Comments