Aleva Moda lyrics ( ಕನ್ನಡ ) - Aleva Moda - super cine lyrics

Aleva Moda - Sonu nigam Lyrics

Singer Sonu nigam

Aleva Moda title song details - Aleva Moda


▪ Song: Aleva Moda
▪ Music: Mano Murthy
▪ Singer: Sonu Nigam
▪ Lyrics: Jayant Kaikini
▪ Film: Aleva Moda


Aleva Moda song details - Aleva Moda


ಅಲೆವ ಮೋಡ ಅವಳು, ದಿನವೂ ಕಾಡುವವಳು
ಅವಳನೆ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು
ಎದೆಯಾಳದಲ್ಲಿ, ಅವಳ ವಿಳಾಸ
ಬಿಡಿಸಿ ಹೇಳಬೇಕೇ ಒಲಿದ ಮೇಲೆ ನಾನು
ಅಲೆವ ಮೋಡ ಅವಳು, ದಿನವೂ ಕಾಡುವವಳು
ಅವಳನೆ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು..

ಎದೆಗೊರಗಿ ಎಣಿಸುವೆನು
ಅಡಗಿರುವ ಬಯಕೆಗಳ
ಸಿಗಲಿ ಕೈಗೆ ಮೊದಲು
ಜಗಳಾ ಉಂಟು ಬಹಳ
ಮನಗಾಣಬಲ್ಲೆ, ಅವಳ ಇರಾದೆ
ಸಿಗದೇ ತಾನೇ ಏನು ಕರೆದ ಮೇಲೆ ನಾನು
ಅಲೆವ ಮೋಡ ಅವಳು, ದಿನವೂ ಕಾಡುವವಳು
ಅವಳನೆ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು

ತೆರೆದಿರದ ಪುಟಗಳಲಿ
ಪದವಿರದ ಬರವಣಿಗೆ
ಕರುಳಾ ಬಳ್ಳಿಯೊಂದು ಬಿಡದೆ ಸೆಳೆವ ಹಾಗೆ
ನಡು ದಾರಿಯಲ್ಲಿ, ಹಸಿರು ನಿಶಾನೆ
ಕಳೆದು ಕೊಳ್ಳಲಾರೆ ಪಡೆದಾ ಮೇಲೆ ನಾನು
ಮಿನುಗೋ ನೀಲಿ ಮುಗಿಲು, ಮನದಿ ಮೂಕ ದಿಗಿಲು
ಮಮತೆಯ ಮಡಿಲನು ಬಯಸುತ ಅಲೆವೆನು
ಕರೆಯಿದು ತಲುಪುವುದೇನು
ನದಿ ತೀರದಲ್ಲ, ಅಲೆಯ ನಿನಾದ
ಮರಳಿ ಹೋಗಲಾರೆ ಇಳಿದ ಮೇಲೆ ನಾನು

ಅಲೆವ ಮೋಡ ಅವಳು, ದಿನವೂ ಕಾಡುವವಳು
ಅವಳನೆ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು..



Post a Comment

0 Comments