Yaaro nee lyrics ( ಕನ್ನಡ ) - Kavacha - Super cine lyrics

 Yaaro nee lyrics - Kavacha 



Yaaro nee song details

  • Song : Yaaro nee
  • Movie : Kavacha
  • Singer : V yasraj
  • Music : Arjun Janya
  • Lyrics : K Kalyan

Yaaro nee lyrics in Kannada

ಯೊರೋ ನೀ ಲಿರಿಕ್ಸ್

ಯಾರೊ ನೀ ಯಾರೊ ನೀ ಯಾರ್ ನೀ 
ನಿನ್ನೋರೆ ನಿನಗಿಲ್ಲ ಇಲ್ಲಿ 
ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ
ನಿನ್ನ ತ್ಯಾಗ ಧರೆಗೂ ಮಿಗಿಲು
ಕಣ್ಣೀರಾಯ್ತು ನೋಡು ಮುಗಿಲು
ಗುಣದಲ್ಲಿ ಮಾತಲ್ಲಿ ರಾಜ ನೀನು ತಿಳಿತಿಲ್ಲ ಜಗಕೆ
ಯಾರೊ ನೀ ಯಾರೊ ನೀ ಯಾರ್ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ 
ತಾರೆಯು ಚುಕ್ಕಿಯು ಎಲ್ಲಿ

ಕಾಪಡೋ ದೇವರಿಗೆ ಕಾರ್ಮೋಡ ಕವಿದಂತೆ 
ನೀ ತಾಯಾದೆ ಮಮತೆಲಿ ಆಗ
ತರಗೆಳೆಯದೆ ಮಣ್ಣಲ್ಲಿ ಈಗ
ಬಂಧವೆಲ್ಲ ಬಂಧನವಾಗೋಯ್ತು
ಭಾವನೆಗಳ ಬಾಗಿಲು ಮುರಿದೋಯ್ತು
ಸುಳ್ಳುಗಳು ನಿಜವನ್ನೆ ನುಂಗಿ ನೀರು ಕುಡಿದಂಗಾಯ್ತು
ಯಾರೊ ನೀ ಯಾರೋ ನೀ ಯಾರ್ ನೀ 
ನಿನ್ನೋರೆ ನಿನಗಿಲ್ಲ ಇಲ್ಲಿ 
ತಾರೆಯು ಚುಕ್ಕಿಯು ಎಲ್ಲಿ

ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ
ಇಲ್ಲಿ ಕಣ್ಣಿದ್ದು ಕುರುಡಾದರೂ ಎಲ್ಲಾ
ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ
ನೀನು ಸತ್ಯ ನಿನ್ನವರು ಮಿತ್ಯ
ಆತ್ಮಸಾಕ್ಷಿ ಆಗೋಯ್ತು ಅಂತ್ಯ 
ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು
ಯಾರೊ ನೀ ಯಾರೊ ನೀ ಯಾರ್ ನೀ 
ನಿನ್ನೋರೆ ನಿನಗಿಲ್ಲ ಇಲ್ಲಿ 
ನಿನ್ನೋರೆ ನಿನಗಿಲ್ಲ ಇಲ್ಲಿ


Yaaro nee lyrics video

Post a Comment

0 Comments