Thago lyrics - Rahul dit-o
Thago song details
- Song : Thago
- Singer : Rahul dit-o
- Lyrics : Rahul dit-o
- Music : Tousif
Thago lyrics in Kannada
ತಗೊ ಲಿರಿಕ್ಸ್
ಈ ಹಾಡು ನಾನ್ ಯಾರ್ ಯಾರ್ಗೆ ಹೇಳಬೇಕು
ಅನ್ಕೊಂಡಿದಿನೊ ಅವರೆಲ್ಲರಿಗೂ ಅನವಯಿಸುತ್ತೆ
In case ಅನವೈಸ್ತ ಇಲ್ಲ ಅನ್ಸುದ್ರೆ, 6 ತಿಂಗಳ ಹಿಂದೆ ಏನಾಗಿತ್ತು ಅಂತ ನೆನಪಿದೆ ತಾನೆ?
ಲೇ ಮಗ ನಿಂಗೆ ಇದೆಲ್ಲಾ ಬೇಕಿತ್ತೆನೊ?
ಹೇ ಅವರಷ್ಟೂ views ಇಲ್ಲ ಬಿಡೊ ನಿಂದು,
ಲೊ ಎತ್ತಲೊ chapo beat copy ಮಾಡವ್ನೆ
ಇದು ಒಂದು rap song ಹೊ?
ಹೇ ಇವರಷ್ಟೂ reach ಆಗೊಲ್ಲ ನೀನು
ಮಗ ದುಡ್ಡು ಖರ್ಚು ಆದ್ರೂ ಪರವಾಗಿಲ್ಲ,
ಈ ನನ್ ಮಗನ್ನ ಸರಿಯಾಗಿ troll ಮಾಡಿಸಿ ರುಬ್ಬಬೇಕು
ಉದ್ದಾರ ಆಗಲ್ಲ ಬಿಡೊ ನೀನು
ದೇವರಾಣೆ ಉದ್ದಾರ ಆಗಲ್ಲ ಬಿಡೊ ನೀನು
ನನಗನ್ಸಿದ್ದನ ನಾನ್ ಹೇಳಿದ್ದೆ, ಇವಾಗ್ ಬೇಕು ಅಂದ್ರು ಬೇಡ ಅಂದ್ರು ಕೊಡುತ್ತೀನಿ
ತಗೋ...
ಹೇಳಬೇಕು ಅಂತ ಒಂದು ಕಥೆ ,
ಹೇಳಿಲ್ಲಂದ್ರುನೂ ತೆಗಿತೀರ ಕ್ಯಾತೆ
ಕೇಳುಸ್ಕೊ ಕೇಳಬೇಡ ಮತ್ತೆ ಮತ್ತೆ,
ಎಲ್ಲರ ಮನೆಲೂ ದೋಸೆ ತೂತೆ
ಇಲ್ಲಿ ಯಾರ್ ಯಾರ್ ಹೆಂಗಂತ ನಂಗ್ ಗೊತ್ತು,
ನಿಯತ್ತಿಗ್ ಬೆಲೆ ಕಡಿಮೆ ಯಾವತ್ತು
ಬಗ್ಗೋರಿಗೆಲ್ಲಾ ಬಕೆಟ್ ಇಡು ಹತ್ತು,
ಎರಡೆರಡು ಮುಖ ಅಸಲಿಯತ್ತು
ಲೋ
ಇದ್ದಿದ್ ಇದ್ದಂಗೆ ಹೇಳೊ ಗುಂಡಿಗೆನೊ ನಂದು,
ಅದೇ ಕೊನೆದಲ್ಲ ಅದೆ ಭಾಗ ಒಂದು
ನಂಗನ್ಸಿದ್ದನ್ ಹೇಳಿದ್ದೆ ನಾನೆ ಮುಂದೆ ಬಂದು, ಹತ್ತುಕೊಂಡು ಉರ್ದಿದ್ದು ಪೆಭ್ರವರಿ 1
ನಂಗಿರೊ ತಲೆ ನೋವೆ ನೂರ ಹನ್ನೊಂದು, ನಿಮ್ಮನ್ನ ಕೇಳಿದ್ನ? ತಗೊಳಿ ನಂದೊಂದು
ಬೇಕಿಲ್ಲ ಅಂತಿರ ಯಾವಳ್ದು ಯಾವನ್ದು,
ಕಾಲ್ ಎಳಿಯಕ್ ಮಾತ್ರ ನೀವ್ ನಾ ಮುಂದು ತಾ ಮುಂದು
ಅವತ್ತು ಲೈವ್ ಅಲ್ ಇದ್ದೆ ನಾನು ಸ್ವಲ್ಪ rude
Sade troll ಗಳಿಂದ ಹಾಳಾಗಿತ್ತು mood
ನಿಂಗೂ ಹಂಗಾದ್ರೆ coolಆಗಿ ಈರ್ತೀಯ dude ?
ಹುಟ್ಟದಾಗಿಂದಲೂ ನಂದ್ ಅದೇ attitude
ಬಾಯಿ ಬಡ್ಕೊಂಡ್ರಿ copy beat ಅಂತ
ಸಂಗೀತದಲ್ ಇರೋದು ಏಳೆ ಸ್ವರ ಕಂದ
ಗೊತ್ತಿಲ್ಲದಿದ್ದರೂ music ಗಾಳಿ ಗಂಧ ಮಾತಡಕ್ ತಗೊಳ್ತೀರ note 'u ಬಂಧ
ಅವರಪ್ಪನ ದುಡ್ಡಲ್ಲಿ ಶೋಕಿ
ಮಾಡೊರೆಲ್ಲ ನಂಗೆ ಬರ್ನಲ್ ಕೊಡುಸ್ತಾರಂತೆ
ಮಗ ನಿಂಗೆ ಇದೆಲ್ಲಾ ಬೇಕಾಗಿತ್ತ? ಅಂದೋರ್ ಮಲಗ್ ಏಳುತ್ತಿದ್ದಿದ್ ಕುರಿಗಳ ಸಂತೆ
ಹಾಕಿರೊ post ಗಳನ್ನ ಹುಡುಕೊಂಡು ಬಂದು
ಬೇಕಾಬಿಟ್ಟಿ ಬೊಗಳುದ್ರಂತೆ
ಮಗಂದ್ ಮಾಡಕ್ ಕೆಲಸ ಇಲ್ದಿದ್ ಅಡ್ಡ ಮಿಂಡ್ರಿ ಗಳೆ ಬೇಕು ಅಂತ ಹುಟ್ಟಾಕಿದಂತೆ
ತಗೊ ತಗೊ-ನಾನ್ ಹೇಳೊದೆಲ್ಲ ಸೀದಾ ಸಾದಾ ಲೋ
ತಗೊತಗೊ-ನಾನ್ ಮಾಡೊದೆಲ್ಲಾ trending ಮಗ ಲೊ
ತಗೊ ತಗೊ-ನನ್ ಗುರಿ ಇಟ್ರೆ ಗುನ್ನ ಕಣೊ ಲೋ
ತಗೊ ತಗೊ-ನನ್ ಕೆಣಕುದ್ರೆ ಬಿಡೋದಿಲ್ಲ ಲೋ
ತಗೊ ತಗೊ ತಗೊ
ತಗೊ ತಗೊ ತಗೊ
ತಗೊ ತಗೊ ತಗೊ
ತಗೊ ತಗೊ ತಗೊ
Honest ಆಗಿ ಹೇಳುತೀನಿ
I don't give a fuck ಇನ್ಮುಂದೆ super ಆಗಿ ಇದೆ ನನ್ನ luck
ಇಷ್ಟ ಪಡೋರ್ ಜೊತೆಲ್ ಇರ್ತಾರೆ ಅಷ್ಟೇ ಸಾಕು
ಇಷ್ಟ ಇಲ್ಲ ಅಂದ್ರೆ ನೋಡಬೇಡ ಬಿಟ್ಟಾಕು
ಹಾಡುತ್ತಿರೋದ್ ನನ್ನ follow ಮಾಡೋರಿಗೆ ಕೇಳಕಾಗುತ್ತಿಲ್ವಾ? ಹೋಗೊ side ಗೆ ನಾ ಮಾಡೋದನ್ನ ಮಗ rap ಅಂತಾರೆ ಗೊತ್ತಾಗುತಿಲ್ವ google ಮಾಡು ಬೇಕಾದ್ರೆ
ಹೇಳಿದ್ನೆ ಹೇಳಿಕೊ ಕೇಳಿದ್ನೆ ಕೇಳುಕೊ
ಕನ್ನಡ rap ಅಂದ್ರೆ ಇದೇನೆ ತಿಳಿಕೊ
ಹೇಳುತೀನಿ ಕೇಳಿಸ್ಕೊ ಇವಾಗ್ಲೆ ಬರುಕೊ
ನಾನ್ ಇರೋದೆ ಹಿಂಗೆ ನನ್ ನೋಡಿ ಉರುಕೊ
ಕನ್ನಡ rap ಆಚೆ ಹೋಗುತಿಲ್ಲ ಯಾಕ್ ಗೊತ್ತ ಇರೋದಕ್ ನಿಮ್ಮಂತೋರು ನಿಮ್ಮ ತಟ್ಟೇಲಿ ಹೆಗ್ಗಣ ಬಿದ್ದಿದ್ದರು, ಬೇರೆವರ ತಟ್ಟೇಲಿ ನೊಣನ ಹುಡುಕೋರು rap ಅಂದ್ರೆ ಏನಂತ ಗೊತ್ತಿಲ್ಲಂದ್ರೂ ನಂಗೆ ಬುದ್ಧಿವಾದ ಹೇಳಕ್ಕೆ ಬರುತೀರ
ನಂಗನ್ಸಿದ್ದನ್ ಹೇಳುತೀನಿ, ಹೇಳಿದ್ದನ್ನೇ ಮಾಡುತೀನಿ ತಾಕತ್ತು ಇದ್ರೆ ನನ್ನ ತಡಿತೀರಾ?
ಎಲ್ಲರೂ ಅನ್ಕೊಂಡಿದ್ದು ನಾನು ಇರಲಾರದೆ ಇರುವೆ ಬಿಟ್ಕೊಂಡೆ ಅಂತ
ಆದ್ರೆ ಇರೊ ವಿಷಯ ಇದ್ದಂಗೆ ಹೇಳಿದಕ್ಕೆ ಎಲ್ಲರಿಗೆ ಇರುವೆ ಬಿಟ್ಟಂಗ್ ಆಗಿದಂತ ಪದಬಳಿಕೆಯ ಮಾಡ್ತಿರೊ ಉದ್ದೇಶ ಬದಲಾವಣೆ ತರಬೇಕಂತ
ಬಾಯಿಗ್ ಬಂದಾಗ್ ಸುಮ್ನೆ ಮಾತೋಡೊಕು ಮುಂಚೆ ಯೋಚನೆ ಮಾಡ್ರೋ ಇನ್ಮೇಲಾದ್ರು ಸ್ವಂತ
ತಗೊ ತಗೊ -ನಾನ್ ಹೇಳೊದೆಲ್ಲಾ ಸೀದಾ ಸಾದಾ ಲೋ
ತಗೊ ತಗೊ ನಾನ್ ಮಾಡೊದೆಲ್ಲಾ trending ಮಗ ಲೋ
ತಗೊ ತಗೊ ನಾನ್ ಗುರಿ ಇಟ್ರೆ ಗುನ್ನ ಕಣೊ ಲೋ
ತಗೊ ತಗೊ ನಾನ್ ಕೆಣಕುದ್ರೆ ಬಿಡೊದಿಲ್ಲ ಲೋ
ತಗೊ ತಗೊ ತಗೊ
ತಗೊ ತಗೊ ತಗೊ
ತಗೊ ತಗೊ ತಗೊ
ತಗೊ ತಗೊ ತಗೊ
Thago video song :
0 Comments