Saagaradha lyrics ( ಕನ್ನಡ ) - Raajakumara - Super cine lyrics

 Saagaradha lyrics - Raajakumara



Saagaradha song details - Raajakumara

  • Singer :  Sonu Nigam
  • Lyrics : Ghouse Peer
  • Music : V Harikrishna
  • Movie : Raajakumara 

Saagaradha lyrics in Kannada -    Raajakumara

 ಸಾಗರದ ಅಲೆಗು ದಣಿವು
ಪರ್ವತಕು ಬೀಳೋ ಭಯವೂ
ಮಳೆಯಾ ಹನಿಗು ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಕುಷಿಯ ಸ್ನೇಹ

ಹಾರಾಡೋ ಮೊಡವಿಂದು, ರೆಕ್ಕೆಗಳ ಮುರಿದುಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ, ಬೇವರಿರೋ ಸೂಚನೆ
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ನಗುವು

ಬೇಸರದ ರಾಟೆಯು, ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ
ಬದುಕಿನ ಹೊಸ ರೂಪದ, ಪರಿಚಯವಾಗಿ
ಬೆಳಕೇ ಕಳೇಧೋಗೀದೆ, ಸೂರ್ಯನು ಮುಳುಗಿ

ಎಲ್ಲೇ ನೋಡು ಹಳೆ ಗುರುತು, ಬಾಳೂಧೆಗೆ ಎಲ್ಲ ಮರೆತು
ಬಯಸದೆ ನಾ ಎಲ್ಲ ಅಂದು, ಬಯಸಿದರು ಇಲ್ಲ ಇಂದು
ಈಜುವುದೆಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನ ದರ್ಪಣ

ಸಾಗರದ ಅಲೆಗೆ ದಣಿವು...

ಕಾಲ ನೀನು ಮಯ, ಇಲ್ಲಾ ನಿನಗೆ ನ್ಯಾಯ
ವಾಸಿ ಮಾಡೋರ್ಯಾರು, ಒಳಗೆ ಆದ ಗಾಯ
ನಂಜು ಒಂದು, ಹೃದಯ ಸವರಿ
ಮಂಜು ಕವಿದು, ಮೊಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ, ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ, ಒಂಟಿ ನಾ
ಆಸೆಗಳ ಆಕಾಶ ಪಾತಾಳ
ಮುಟ್ಟಿದೆ ಈ ದೀನ

ಸಾಗರದ ಅಲೆಗೆ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ನಗುವು...

Saagaradha song lyrics video 

Post a Comment

0 Comments