Gajamukhane Ganapatiye lyrics ( ಕನ್ನಡ ) - S Janaki - Super cine lyrics

Gajamukhane Ganapatiye - S Janaki Lyrics

Singer S Janaki

Gajamukhane ganapathiye song details

▪ Song : Gajamukhane Ganapatiye
▪ Lyrics: Vijaya Narasimha
▪ Music: M.Ranga Rao
▪ Original Singer: S.Janaki
▪ Sung By: Sarada Bhagavatula

Gajamukhane Ganapatiye song lyrics in Kannada - S Janaki

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ|| ಭಾದ್ರಪದ ||
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು …

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||

ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ ನೀಡಿದರೆ ಸಾಕಯ್ಯ ಜನ್ಮ ಪಾವನ||

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ||

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ||



Post a Comment

0 Comments