Ondu munjane - Sonu nigam, Shreya goshal Lyrics
| Singer | Sonu nigam, Shreya goshal |
| Music | v Harikrisha |
ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ!
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?
ನನ್ನ ತಾರೆ.. ನಿನ್ನ ಮೇಲೆ..
ಗೋಲಿ ಆಡ್ತಿದ್ದ ವಯಸ್ಸಲ್ಲೆ ಪ್ರೀತಿ
ಶುರುವಾಗೋಯ್ತೆ!
ನೀ ಕಾಣೋ.. ಎಲ್ಲ ಕನಸ
ಮಾಡುವೆನೆ ನಾನು ನನಸ
ದಾಸ ನಿಂಗೆ ಖಾಸ..
ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ!
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?
ಯಾರಿಲ್ಲದ ಊರಲ್ಲಿ
ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ!
ಬೆಳದಿಂಗಳ ರಾತ್ರೇಲಿ
ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ!
ನಿನಗೆ ನಾನು, ನನಗೆ ನೀನು
ನನ್ನ ಜಗದ ದೊರೆಯು ನೀನು!
ರಾಣಿ.. ಬಾರೆ
ನೀನಿರದೆ ಒಂದು ನಿಮಿಷ
ಇರಲಾರ ನಿನ್ನ ಅರಸ
ದಾಸ ನಿಂಗೆ ಖಾಸ!
ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ!
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?
ಸಿಹಿಮುತ್ತಿನ ಕಂದಾಯ
ಪ್ರತಿನಿತ್ಯವು ಸಂದಾಯ
ಮಾಡೊದು ಮರಿಬೇಡ ಇಂದು!
ಒಂದೆ ಕಣೆ ಒತ್ತಾಯ
ನಿಂಗೆ ಹಣೆ ಬಿಂದಿಯ
ದಿನ ನಿತ್ಯ ಇಡೊ ಕೆಲಸ ನಂದು
ನನದೆ ಕಣ್ಣು ತಗುಲೊ ಭಯವೆ
ಕಣ್ಣು ಮುಚ್ಚು ಅಲ್ಲೂ ಸಿಗುವೆ
ರಾಣಿ.. ಬಾರೆ
ಕಾವೇರಿ.. ಕಾಯೊ ಕೆಲಸ
ಮಾಡುವೆನೆ ಎಲ್ಲ ದಿವಸ
ದಾಸ ನಿಂಗೆ ಖಾಸ!

0 Comments