Nannamma lyrics - Ananya bhat
Nannamma song details
- Song : Nannamma
- Singer : Ananya bhat
- Lyrics : Ananya bhat
- Music : Ananya bhat
Nannamma lyrics in Kannada
ನನ್ನಮ್ಮ
ಅವಳ ನಗು ಚಂದ
ಅವಳ ದನಿಯು ಮೋಹಕ
ಚಂದದ ಮಲ್ಲಿಗೆಯ ಘಮಕೊಂದು
ಪದವ ಸೇರಿಸಿದಂತೆ
ಅವಳ ನಗು ಚಂದ
ಅವಳ ದನಿಯು ಮೋಹಕ
ಚಂದದ ಮಲ್ಲಿಗೆಯ ಘಮಕೊಂದು
ಪದವ ಸೇರಿಸಿದಂತೆ
ನಭದ ನೀಲಿಗೊಂದು ಹೆಸರಿಟ್ಟಂತೆ
ಮಲೆನಾಡ ಹಸಿರಿಗೆ ನಗು ಕೊಟ್ಟಂತೆ
ನಭದ ನೀಲಿಗೊಂದು ಹೆಸರಿಟ್ಟಂತೆ
ಮಲೆನಾಡ ಹಸಿರಿಗೆ ನಗು ಕೊಟ್ಟಂತೆ
ದೇವರು ತಾನಾಗಿಯೇ ಧರೆಗಿಳಿದಂತೆ
ದೇವರು ತಾನಾಗಿಯೇ ಧರೆಗಿಳಿದಂತೆ
ಅವಳ ನಗು ಚಂದ
ಅವಳ ದನಿಯೂ ಮೋಹಕ
ಕಲಿಕೆಗೆ ಗುರು ಆಕೆ
ಬಯಸಿಕೆ ಬದಿಗಿಟ್ಟಳಾಕೆ
ಕಲಿಕೆಗೆ ಗುರು ಆಕೆ
ಬಯಸಿಕೆ ಬದಿಗಿಟ್ಟಳಾಕೆ
ಸಂಜೆಗೆಂಪಿಗೂ ಸಿಂಗರಿಸುವಾಕೆ
ಸಂಜೆಗೆಂಪಿಗೂ ಸಿಂಗರಿಸುವಾಕೆ
ನನ್ನಮ್ಮ ನೀರೊಳಗಿನ ಹುಡುಕದ ಮುತ್ತು
ಹುಡುಕದ ಮುತ್ತು
ಅವಳ ನಗು ಚಂದ
ಅವಳ ದನಿಯೂ ಮೋಹಕ
ಸೌಂದರ್ಯಕೆ ಸಾಟಿ ಇಲ್ಲದ ಚೆಲುವು
ಅವಳೆಲ್ಲವೂ ಸಹಿಸಿಕೊಳ್ವ ತೆರವು
ಸೌಂದರ್ಯಕೆ ಸಾಟಿ ಇಲ್ಲದ ಚೆಲುವು
ಅವಳೆಲ್ಲವೂ ಸಹಿಸಿಕೊಳ್ವ ತೆರವು
ಅಮ್ಮನಿಗೆ ಸಾಟಿ ಇಲ್ಲವೊಂದು ಘನವು
ಅಮ್ಮನಿಗೆ ಸಾಟಿ ಇಲ್ಲವೊಂದು ಘನವು
ಅವಳೆಂದೆಂದೂ ಅಪರಿಮಿತ ವರವೂ
ಅಪರಿಮಿತ ವರವೂ
ಅಮ್ಮ ನನ್ನಮ್ಮ ನನ್ನ ಕನಸ ಕಂಡ
ನನ್ನ ಕನಸ ಕಂಡ
ಅಮ್ಮ ನನ್ನಮ್ಮ
ನನ್ನ ಕನಸ ಕಾಣಿಸದ
ಅಮ್ಮ ಅಮ್ಮ ಅಮ್ಮ.......
Nannamma lyrics video :
0 Comments