Thavaroora mane noda Bande lyrics ( ಕನ್ನಡ ) - Janapadha - super cine lyrics

Thavaroora mane noda Bande - Manjula gururaj Lyrics

Singer Manjula gururaj

Thavaroora mane noda Bande song details - Janapadha


▪ Song: Tavaroora Maneanoda Bande
▪ Program: Chellidaru Malligeyaa Part 1
▪ Singer: Manjula Gururaj
▪ Music Director: G V Atri
▪ Lyricist: Folk Songs
▪ Music Label : Lahari Music


Thavaroora mane noda Bande song lyrics in Kannada - Janapadha


ತವರೂರ ಮನೀ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹತ್ತು ಹದಿನಾಲ್ಕು ವರ್ಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಹತ್ತು ಹದಿನಾಲ್ಕು ವರ್ಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಮುತ್ತಿನಂತೆ ಜೋಪಾನವಾಗಿ ಬಾಳಿದೆ
ಅದು ಎತ್ತ ಹೋದರೂ ಕನಸಾಗಿದೆ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತಿದ್ದೆ ನಾನಾ ತರದಲ್ಲಿ
ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲಿ
ಅದು ಮರೆಯದು ಈ ಬಾಳಿನಲ್ಲಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣಿರ ತಂದೆ

ಅತ್ತಿಗೆ ಕೈಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅತ್ತಿಗೆ ಕೈಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೆ
ತಂಗಿ ಬಾರಮ್ಮ ಇತ್ತ ಎನಬಾರದೆ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತನಾಡಿಸದೊಳ ಸೇರಿದ.. ಆ.. ಆ...
ಅಣ್ಣ ಮಾತಾನಾಡಿಸದೊಳ ಸೇರಿದ
ತನ್ನ ಸಿರಿಯಲ್ಲಿ ತಾನೊಡಗೂಡಿಯ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಶಿವನೆ.. ಈ.. ಶಿವನೆ.. ಶಿವನೆ....
ಶಿವನೆ ನಾ ಕೈಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ ಅಣ್ಣಗೆ
ತಾಯಿ ಜಗದಾಂಬೆ ಕೈ ಮುಗಿದು ಬೇಡುವೆ
ಕಾಯಿ ಕರ್ಪೂರದಾರತಿ ಬೆಳಗುವೆ
ತಾಯಿ ಜಗದಾಂಬೆ ಕೈಮುಗಿದು ಬೇಡುವೆ
ಕಾಯಿ ಕರ್ಪೂರದಾರತಿ ಬೆಳಗುವೆ.......



Post a Comment

0 Comments