Oora sera bahude neenu lyrics ( ಕನ್ನಡ ) - Magalu Janaki - Super cine lyrics

Oora sera bahude neenu - Vijay Prakash Lyrics

Singer Vijay Prakash

Oora sera bahude neenu song details - Magalu Janaki

▪ Singer : Vijay Prakash
▪ Serial : Magalu Janaki

Oora sera bahude neenu song lyrics in Kannada - Magalu Janaki

ಊರ ಸೇರಬಹುದೆ ನೀನು
ದಾರಿ ಮುಗಿಯದೆ
ಹೊನ್ನು ದೊರೆಯಬಹುದೆ ಹೇಳು
ಮಣ್ಣ ಬಗಿಯದೆ
ಬಾಳ ದಾರಿಯಲ್ಲಿ ಇರುಳು
ಕವಿದ ಹೊತ್ತಲ್ಲಿ
ಪ್ರೀತಿ ಕಣ್ಣು, ತೆರೆದ ದೀಪ
ಮಗಳು ಜಾನಕಿ..
ಮಗಳು ಜಾನಕಿ..


ಒಂದೆ ಮೂಲ ಎರಡು ನಡಿಗೆ
ರೆಕ್ಕೆ ಎರಡು ಹಕ್ಕಿಗೆ
ಹರಿವ ನದಿಯು ಹರಿಯಲಿಹುದು
ಇಂದಿನಂತೆ ನಾಳೆಯು
ಮಗಳು ಜಾನಕಿ..
ಮಗಳು ಜಾನಕಿ..

ನಿನ್ನ ದಾರಿ ನೀನೆ ನಡೆದು
ಸೇರಬೇಕು ಗುರಿಯನ್ನು
ತಡೆಯಬಹುದೆ ಕಡಲ ಕಡೆಗೆ
ಓದುವಂತ ತೋರುವನು
ಒಂದು ಸತ್ಯ ನೂರು ಮಿತ್ಯ
ತೆರೆದ ಕಣ್ಣಿನ ಆಟಕೆ
ಮಗಳು ಜಾನಕಿ


ಇಂದು ಸೋಲು, ನಾಳೆ ಗೆಲುವು
ಇರುಳು ಉರಿವ ದೀಪಸಾಲು
ಮರೆಯಲೊಂದು ತಾಯ ಕರುಳು
ಮರುಗುತಿಹುದು ಹಗಲು ಇರುಳು
ಮಗಳು ಜಾನಕಿ
ಮಗಳು ಜಾನಕಿ

ಇಂದಿನಿರುಳ ಗರ್ಭದಲ್ಲಿ
ಒಂದು ಹಗಲು ಅಡಗಿದೆ
ಕುದಿವ ಕಡಲ ನಡುವೆ ಒಂದು
ಮುಳುಗದಿರುವ ಹಡಗಿದೆ
ಕಾರಿರುಳಿನ ಒಡಲಿನಲ್ಲಿ ತೂಗುವ ಕನಸು
ಕಣ್ಣ ಹನಿಯ ಕೆಳಗೆ ನಗೆ
ನವಿಲ ನನಸು
ಅಗ್ನಿ ಇಂದ ಎದ್ದ ಬೆಳಕು
ಮಗಳು ಜಾನಕಿ..
ಮಗಳು ಜಾನಕಿ..



Post a Comment

0 Comments