Happy Song - Vasuki Vaibhav , Madhuri Seshadri Lyrics
| Singer | Vasuki Vaibhav , Madhuri Seshadri |
Happy song details - Law
▪ Movie : Law
▪ Music Composer : VasukiVaibhav
▪ Lyrics Jayanth Kaikini
▪ Singers : VasukiVaibhav, Madhuri Seshadri
Happy song lyrics in Kannada - Law
ನೀರ ಮೇಲಿದೆ
ನೀರ ಮೇಲಿದೆ
ಬೀಸೊ ಗಾಳಿಯ ಹೆಜ್ಜೆ
ಗಾಳಿಯಲ್ಲಿದೆ ಹಾರೊ
ಹಕ್ಕಿಯ ಹೆಜ್ಜೆ
ಗಂಧ.... ಹೂವಿನ ಹೆಜ್ಜೆ
ಬಂಧ ಭಾವದ ಹೆಜ್ಜೆ
ಮುಂದೆ ಹೆಜ್ಜೆ ಇಟ್ಟರೇನೆ ಚಾರಣ
ಚಿಕ್ಕ ಚಿಕ್ಕ ಆಸೆಯಲ್ಲೇ ಜೀವನ
ಹಂಚಿ ಹೆಚ್ಚಾಗುವುದು ಗೆಳೆತನ
ದಾರಿ ಓಲೈಸುತ್ತಿದೆ ನಿನ್ನಾ
ನಿತ್ಯ ಬಂದು ನೀಡುತಾನೆ
ಸೂರ್ಯ ಪ್ರಶ್ನೆ ಪತ್ರಿಕೆ
ನೀಡು ನೀನು ಬಾಳಿಗೀಗ ಬೇರೆ ರೂಪರೇಖೆ
ಕಾದಿರಿಸು..
ಒಂದಿಷ್ಟು ಕನಸು..
ಕಾದಿರಿಸು..
ಚಂದ್ರನ ಬೆಳಕು..
ಕಾದಿರಿಸು..
ನಿನ್ನ ಹೃದಯದಿ ಜಗವನು
ಪ್ರತಿ ಮುಖ ಅಮಾಯಕ
ಕುತೂಹಲ ಸಾವಿರ
ಪ್ರತಿಕ್ಷಣ ವಿನೂತನ
ಅಲ್ಲಾಡಿದೆ ಹೂಮರ
ಅಗೊ ಅಗೊ ತಿರುವಲ್ಲೆ ಕಾಡಿದೆ
ಕೌತುಕ ಸಂಬಂಧಕ್ಕೆ
ಹೆಸರನ್ನು ನೀಡಲೇ ಬೇಕಾ...
ಕಳೆದು ನೀನು ಹೋಗದೆ
ಹೊಸದು ಎನು ಸಿಕ್ಕದು
ನಾಲ್ಕು ದಿನದ ಸಂತೆಯಲ್ಲಿ
ಜೀವ ಮೂಕ ವಿಸ್ಮಿತ
ಖುಷಿಯ ಅರ್ಥ
ಆಗಲಿಕ್ಕೆ ಬೇಕು ನೋವು ಸಹಿತ ಕಾದಿರಿಸು ..
ಕಣ್ಣಲಿ ಹನಿಯ
ಕಾದಿರಿಸು
ಇನ್ನೊಂದು ಪುಟವ
ಕಾದಿರಿಸು ..
ನಿನ್ನ ಒಳಗಿನ ಮಗುವನ್ನು
ನೀರ ಮೇಲಿದೆ
ಬೀಸೊ ಗಾಳಿಯ ಹೆಜ್ಜೆ
ಗಾಳಿಯಲ್ಲಿದೆ ಹಾರೊ
ಹಕ್ಕಿಯ ಹೆಜ್ಜೆ
ಮುಂದೆ ಹೆಜ್ಜೆ ಇಟ್ಟರೇನೆ ಚಾರಣ
ಚಿಕ್ಕ ಚಿಕ್ಕ ಆಸೆಯಲ್ಲೇ ಜೀವನ
ಹಂಚಿ ಹೆಚ್ಚಾಗುವುದು ಗೆಳೆತನ
ದಾರಿ ಓಲೈಸುತ್ತಿದೆ ನಿನ್ನಾ
ನಿತ್ಯ ಬಂದು ನೀಡುತಾನೆ
ಸೂರ್ಯ ಪ್ರಶ್ನೆ ಪತ್ರಿಕೆ
ನೀಡು ನೀನು ಬಾಳಿಗೀಗ
ಬೇರೆ ರೂಪರೇಖೆ
ಕಾದಿರಿಸು
ಒಂದಿಷ್ಟು ಕನಸು
ಕಾದಿರಿಸು
ಚಂದ್ರನ ಬೆಳಕು
ಕಾದಿರಿಸು
ನಿನ್ನ ಒಳಗಿನ ಮಗುವನ್ನು

0 Comments