Saaluthillave - Shreya goshal , Vijay Prakash Lyrics
| Singer | Shreya goshal , Vijay Prakash |
| Song Writer | Dr . V Nagendra prasad |
ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
ಒಂದೇ ಸಮನೆ ನಿನ್ನ ನೋಡುತಿದ್ದ ಮೇಲು
ತುಂಬಾ ಸಲಿಗೆಯಿಂದ ಬೆರೆತು ಹೋದ ಮೇಲು
ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು ಉಸಿರು ಉಸಿರು ಬೆಸೆದ ಮೇಲು
ಸಾಲುತ್ತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಮತ್ತು ಬೇರೆಯಿಲ್ಲವೆ
ಮುಂಜಾನೆ ನನ್ನ ಪಾಲಿಗಂತು ಸಾಲೋಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೋಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿಹೋಗಿ ಸಮಯ ಹಿಂದೆ ಸರಿದುಹೋಗಿ
ಮೊದಲ ಭೇಟಿ ನೆನೆದ ಮೇಲು
ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ ನಿನ್ನ ಹಾಗೆ ಅಮಲು ಬೇರೆಯಿಲ್ಲವೇ
ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೋಲ್ಲ
ಏಳು ಸ್ವರವು ಮುಗಿದ ಮೇಲು ಕಾಡುವಂತ ನನ್ನ ನಿನ್ನ ಯುಗಳ ಗೀತೆ ಮುಗಿಯೋದಿಲ್ಲ
ಸಾಲುತಿಲ್ಲವೆ ಸಾಲುತಿಲ್ಲವೆ
ನಿನ್ನ ಹಾಗೆ ಅಮಲು ಬೇರೆಯಿಲ್ಲವೇ
ಶ್ವಾಸದಲ್ಲಿ ನೀನು ವಾಸವಿದ್ದ ಮೇಲು ನನ್ನ ಹೃದಯವನ್ನು ಹಾಯಾಗಿ ಕದ್ದ ಮೇಲು
ಎರೆಡು ಹೃದಯ ಬೆರೆತ ಮೇಲು
ಹಾಡು ಮುಗಿದುಹೋದಮೇಲು ಮೌನ ತುಂಬಿ ಬಂದ ಮೇಲು
ಸಾಲುತಿಲ್ಲವೆ ಸಾಲುತಿಲ್ಲವೆ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

0 Comments